ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ ನಮ್ಮ ನಾಯಕರಿಗೆ, ಸ್ಥಳೀಯ ಮುಖಂಡರು ಮತ್ತು ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು.ಈ ಗೆಲುವು ಕಾರ್ಯಕರ್ತರ ಗೆಲುವು.ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ 22ನೇ ವಾರ್ಡ್.

ನಡೆದಾಡುವ ದೇವರು ಡಾ ||ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿ ರವರ 114 ನೇ ಜನ್ಮ ದಿನದ ಪ್ರಯುಕ್ತ ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ಅನಾಥ ಆಶ್ರಮ ದಲಿ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ ವಿತರಣೆ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ನಾಡಿನ ಸಮಸ್ತ ಜನತೆಗೆ ಪವಿತ್ರ “ಮಹಾಶಿವರಾತ್ರಿ” ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶಿವರಾತ್ರಿಯು ಎಲ್ಲರ ಜೀವನದಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಐಶ್ವರ್ಯ ಹಾಗೂ ಸ್ನೇಹ ಸೌಹಾರ್ದತೆಯನ್ನು ಹೊತ್ತು ತರಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುವುದರ ಮೂಲಕ ಮಹಾದೇವನ ಕೃಪೆ ಸದಾ ನಿಮ್ಮೆಲ್ಲರ ಮೇಲೆ ಇರಲಿ ಎಂದು ಆಶಿಸುತ್ತೇನೆ.

ಭಾರತ ದೇಶದ ಪ್ರಜಾಪ್ರಭುತ್ವದ ಕರ್ತೃ, ಭಾರತೀಯ ನ್ಯಾಯವಾದಿ ಅರ್ಥಶಾಸ್ತ್ರಜ್ಞ, ಸಾಮಾಜಿಕ ಸಮಾನತೆ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕ ” ಡಾ|| ಬಿ. ಆರ್ ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಶುಭಾಶಯಗಳು “

ಡಾ|| ಬಿ. ಆರ್ ಅಂಬೇಡ್ಕರ್ ಅವರು ಸೂಚಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯುವುದೇ ನಾವು ಅವರಿಗೆ ನೀಡುವ ಮಹಾ ಗೌರವ. ಈ ದಿನ ಬಾಬಾ ಸಾಹೇಬರಿಗೆ ನಾವೆಲ್ಲರೂ ತಲೆಬಾಗಿ ನಮಿಸೋಣ.

ನಾಡಿನ ಸಮಸ್ತ ಜನತೆಗೆ ಹಿಂದೂ ಹೊಸ ವರ್ಷ “ಯುಗಾದಿ” ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ ಹಬ್ಬವು ಎಲ್ಲರ ಬದುಕಲ್ಲಿ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಸಂತೋಷವನ್ನು ಹೊತ್ತು ತರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

“ಸಮಸ್ತ ಲೋಕಾ ಸರ್ವೇ ಜನಾ ಸುಖಿನೋ ಭವಂತು”