ದಾವಣಗೆರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀನಿವಾಸ ದಾಸಕರಿಯಪ್ಪ ಅವರ ಆಯ್ಕೆಯಿಂದ ಹರ್ಷ ವ್ಯಕ್ತಪಡಿಸಿರುವ ಯಿಂದ ಇಂದು ನಗರದ ವಿನೋಬ ನಗರ ಚೌಡೇಶ್ವರಿ ದೇವಸ್ಥಾನ, ವಿನೋಬಾ ನಗರ ಸಿಧ್ಧಿ ವಿನಾಯಕ ಗಣಪತಿ ದೇವಸ್ಥಾನ, ಸ್ವಾಮಿ ಅಯಪ್ಪ ದೇವಸ್ಥಾನ ನಿಜಲಿಂಗಪ್ಪ ಬಡಾವಣೆ, ರಾಂ & ಕೋ ಗಣಪತಿ ದೇವಸ್ಥಾನ, ಶಾಮನೂರ ಆಂಜನೇಯ ದೇವಸ್ಥಾನ ಹೀಗೆ ನಗರ ಎಲ್ಲಾ ವಾರ್ಡಗಳಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಅಭಿಮಾನಿಗಳು ಅವರಿಗೆ ಶುಭ ಹಾರೈಯಿಸುತ್ತಾ ಸಾವಿರಾರು ಕಾರ್ತಿಕ ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ್ ರವರು, ಹಾಗು ಎಸ್.ಡಿ.ಕ ಸಂಘದ ಕಾರ್ಯದರ್ಶಿಗಳಾದ ರಮೇಶ್ ರವರು, ಅನೇಕ ವರ್ಷಗಳಿಂದ ಶ್ರೀನಿವಾಸ್ ದಾಸಕರಿಯಪ್ಪ ಸಮಾಜದ ಪರ ಕಳಕಳಿಯನ್ನು ಗಮನಿಸುತ್ತಾ ಬಂದಿದ್ದೇವೆ. ಇವರ ತಂದೆಯವರ ಆಶಿರ್ವಾದ ಹಾಗು ಮಾರ್ಗದರ್ಶನದಲ್ಲಿ ಕಳೆದ ದಶಕದಿಂದ ಶ್ರಮ ಪಟ್ಟು ಇಂದು ಅತ್ಯುನ್ನತ ಉದ್ಯೋಮಿಯಾಗಿ ಬೆಳೆದಿದ್ದಾರೆ. ಆದರೇ, ಎಂದೂ ಸಹ ಎಷ್ಟೇ ಕಷ್ಟಕರ ಸನ್ನಿವೇಶದಲ್ಲೂ ಸಾಮಾಜಿಕ ಬದಲಾವಣೆ ತಮ್ಮ ಜವಾಬ್ದಾಯಿಂದ ಹಿಂದೆ ಸರಿಯಲಿಲ್ಲಾ.ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ರವರಿಂದ ಪ್ರೇರಿತರಾದ ಇವರು, ತಮ್ಮ ದ್ವಾರದಲ್ಲಿ ಕೈ ಬೇಡಿ ಬಂದಂತಹ ಬಡವರು, ದೀನ, ದಲಿತರು, ಮುಸಲ್ಮಾರಿಗೆ ಎಂದೂ ಕೈ ಬಿಡಲಿಲ್ಲಾ.ಸದಾ ಸಮಾಜದಲ್ಲಿರುವ ಶಕ್ತಿ ಹೀನರ, ವೃಧ್ಧರು ಪರ ಬೆನ್ನೆಲುಬಾಗಿ ನಿಂತರು. ಆದರೆ, ಇದನ್ನೂ ಎಂದೂ ರಾಜಕೀಯ ಮಾಡಲಿಲ್ಲಾ.ಇಂದಿನ ಸಮಾಜದಲ್ಲಿ ಬಡವರಿಗೆ ಸಣ್ಣ ಸಹಾಯ ಮಾಡಿ, ದೊಡ್ಡಗಾಗಿ ಪೋಟೊ ಹಾಕಿಸಿಕೊಳ್ಳುವವರು, ಕೇವಲ ರಾಜಕೀಯ ಲಾಭ ಪಡೆಯುವ ಮುಖಂಡರ ನಡುವೆ.ತಾನು ಆರ್ಥಿಕವಾಗಿ ಸಧೃಢನಾಗಿದ್ದೇನೆ, ಹಾಗೆ ನೂರಾರು ಯುವ ಜನತೆಗೆ, ಆರ್ಥಿಕವಾಗಿ ಸ್ವಾಲಂಭಿಯಾಗಲು ನೆರವು ನೀಡಿಬೆಂದು ಚಿಂತಿಸಿ, ಅದನ್ನು ಕಾರ್ಯಗತ ಮಾಡಿದರು. ಆದರೆ, ಅದನ್ನು ಎಂದೂ ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲಾ.ಇವರು ಗಳಿಸಿರುವ ಜನರ ಪ್ರೀತಿ ಮತ್ತು ಆಶಿರ್ವಾದವೇ ಇವರನ್ನು ಇಂದು ಸಮಾಜದಲ್ಲಿ ಗರ್ವದಿಂದ ತೆಲೆ ಎತ್ತಿ ನಡೆಸುತ್ತಿದೆ.ಸದಾ ಸಮಾಜಕ್ಕಾಗಿ ಮಿಡಿಯುವ ಇವರ ಹೃದಯದ ಸಂಕಲ್ಪವು ಸಿಧ್ಧಿಯಾಗಲಿ ಎಂದು ದೇವರಲ್ಲಾ ಪ್ರಾರ್ಥಿಸುತ್ತೇವೆ.ಸಾವಿರಾರು ಯುವ ಜನತೆಯ ಹಾಗು ಸಮಾಜದ ಎಲ್ಲಾ ವರ್ಗದ ಜನರ ಬೆಂಬಲ ಹಾಗು ಇವರ ಸಂಘಟನಾ ಶಕ್ತಿಯನ್ನು ಅರಿತ ಪಕ್ಷ ಇವರನ್ನು ಆಯ್ಕೆ ಮಾಡಿದೆ.ದಾವಣಗೆರೆ ಬಿ.ಜೆ.ಪಿ ಎಂಬ ಶಿಖರಕ್ಕೆ ಕಿರಿಟದಂತರಿರುವ ಶ್ರೀನಿವಾಸ ದಾಸಕರಿಯಪ್ಪ ರವರ ಕೀರ್ತಿ ಶಿಖರಕ್ಕೂ ಮೀರಿ ಆಕಾಶಕ್ಕೆ ವ್ಯಾಪಿಸಲಿ ಎಂದು ಬಯಸುತ್ತಾ. ಇವರ ಆಯ್ಕೆಯಾಗಳು ಸಹಕರಿಸಿದ ಮಾನ್ಯ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ್ ರವರಿಗೆ, ಮಾನ್ಯ ಶಾಸಕರಾದ ಎಸ್.ಎ.ರವೀಂದ್ರಸಾಥ್ ರವರಿಗೂ, ಜಿಲ್ಲಾಧ್ಯಕ್ಷರಾದ ಶ್ರೀ ವೀರೇಶ್ ಹನಗಾವಡಿ ಮತ್ತು ಪಕ್ಷದ ಎಲ್ಲಾ ಮುಖಂಡರಿಗೂ, ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು ಹೇಳುತ್ತಿದ್ದೇವೆ.