ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ದಾವಣಗೆರೆ ಬಿಜೆಪಿ ಉತ್ತರ ಮಂಡಲದ ವತಿಯಿಂದ ಇಂದು ಬೆಳಿಗ್ಗೆ ನೀಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಲ್ಲಿ ಗೋಪೂಜೆಯನ್ನು ನೆರವೇರಿಸಲಾಯಿತು.

Posted on

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ದಾವಣಗೆರೆ ಬಿಜೆಪಿ ಉತ್ತರ ಮಂಡಲದ ವತಿಯಿಂದ ಇಂದು ಬೆಳಿಗ್ಗೆ ನೀಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಲ್ಲಿ ಗೋಪೂಜೆಯನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಬಿಜೆಪಿಯ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬಿ ಎಸ್, ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸ್ಕರಿಯಪ್ಪ, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷರಾದ ಸಂಗಣ್ಣ ಗೌಡ್ರು, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ, ಬಸವರಾಜ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ನಾಗರಾಜ್ ಲೋಕಿಕೆರೆ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ, ಉತ್ತರ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ರವಿ ನಾಯ್ಕ್, ಉತ್ತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ವೆರ್ಣೆಕರ್, ಪದಾಧಿಕಾರಿಗಳಾದ ರಘು ಕಾರಿಗನೂರು, ಹರೀಶ್ ಶಾಮನೂರು, ಕಿಶೋರ್, ಕಿರಣ್, ಆದರ್ಶ, ಅನಿಲ್, ವಿವೇಕ್, ಶಶಿಕುಮಾರ್, ವಿಠ್ಠಲ ಹಾಗೂ ಎಲ್ಲಾ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *